Kannada Nage – Hanigalu – Odi Aanandisiri

ಪ್ರಸಿದ್ದವಾದ ಪತ್ರಿಕೆ

ಶಿಕ್ಷಕ : ಲೋ ರಾಜು, ಭಾರತದಲೆಲ್ಲಾ ಪ್ರಸಿದ್ದವಾದ ಪತ್ರಿಕೆ ಯಾವುದು ?
ರಾಜು : ಲಗ್ನ ಪತ್ರಿಕೆ ಸಾರ್ !!!

ಐಟಿ ದೇವರುಗಳು
ಬ್ರಹ್ಮ : ಸಿಸ್ಟಮ್ ಇನ್‍ಸ್ಟಾಲರ್
ವಿಷ್ಣು : ಸಿಸ್ಟಮ್ ಸಫೋರ್ಟರ್
ಶಿವ : ಡಿಲೀಟ್ ಸ್ಪೆಷಲಿಷ್ಟ
ನಾರದ : ಡಾಟಾ ಟ್ರಾನ್ಸ್‍ಫರರ್
ಅಪ್ಸರೆ : ಡೌನ್‍ಲೋಡ್ ವೈರಸ್

ಟೈ
ಮಿಸ್ಟರ್ ಬೀನ್‍ಗೆ ಯಾವುದೋ ಪಾರ್ಟಿಗೆ ಆಹ್ವಾನ ಬಂತು. ಪಾರ್ಟಿಗೆ ಬರುವಾಗ ನೀಲಿ ಟೈ ಧರಿಸಿರಬೇಕು ಎಂಬ ಸೂಚನೆ ಇತ್ತು.
ಪಾರ್ಟಿಗೆ ಬಂದ ಮಿಸ್ಟರ್ ಬೀನ್‍ಗೆ ಶಾಕ್. ಯಾಕೆಂದರೆ :
‘ಬೇರೆಯವರು ಟೈ ಜೊತೆ ಪ್ಯಾಂಟು, ಶರ್ಟು ಕೂಡ ಧರಿಸಿದ್ದರು’ !!!

ಸಂಬಳ
ಬಾಸ್ : ನೀನು ನನ್ನ ಕಾರ್‌ಗೆ ಡ್ರೈವರ್ ಆದ್ರೆ ಸ್ಟಾರ್ಟಿಂಗ್‍ಗೆ ೨,೦೦೦ ರೂ ಸಂಬಳ ಕೊಡ್ತೀನಿ.

ಚಿಕ್ಕ : ಸರ್, ಸ್ಟಾರ್ಟ್ ಮಾಡೋಕೇ ೨,೦೦೦ ರೂ !!! ಹಾಗಾದರೆ, ಡ್ರೈವಿಂಗ್ ಮಾಡೋಕೆ ಎಷ್ಟು ಕೊಡ್ತೀರಾ ?

ಮೊಬೈಲ್ ಕಂಪನಿಯಲ್ಲಿ ಕೆಲಸ
ಮೊಬೈಲ್ ಕಂಪನಿಯಲ್ಲಿ ಕೆಲಸ ಕಾಲಿ ಇದೆ.
ಯಾವುದೇ ಡಿಗ್ರಿ, ಡಿಪ್ಲಮೊ ಬೇಕಾಗಿಲ್ಲ, ಬೇಗ ‘BIODATA’ ಕಳಿಸಿ.
ಸ್ಯಾಲರಿ 10,000 ರೂ ……..
ಕೆಲಸ…
.
..

….
…..
……
…….
‘TOWER’ ಮೇಲೆ ಕುತ್ಕೊಂಡು ಕಾಗೆ ಓಡಿಸೋದು.

ಆಫೀಸ್ ಸ್ಥಳಾಂತರ
ರಾಂಪ ಕೆಲಸಕ್ಕೆ ಅರ್ಜಿ ಹಾಕಿ ಸಂದರ್ಶನಕ್ಕೆ ಹೋದ
ಸಂದರ್ಶಕ : ನೀನ್ಯಾಕೆ ಹಿಂದಿನ ಕೆಲಸ ಬೆಟ್ಟೆ ?
ರಾಂಪ : ನನ್ನ ಕಂಪನಿ ಆಫೀಸನ್ನು ಸ್ಥಳಾಂತರಿಸಿತು.. ಆದರೆ ನನಗೆ ಹೊಸ ವಿಳಾಸವನ್ನೇ ತಿಳಿಸಲಿಲ್ಲ…!!!

ಒಳ್ಳೆಯ ಕನ್ನಡಿ
ಬಾಸು : ನನ್ನ ಮುಖ ಚೆನ್ನಾಗಿ ಕಾಣುವ ಒಳ್ಳೆ ಕನ್ನಡಿ ಕೊಂಡುಕೊಂಡು ಬಾ….. ಹೋಗು.
ರಾಂಪ : ಎಲ್ಲಾ ಅಂಗಡಿಯಲ್ಲಿ ಹುಡುಕಿದೆ ಸಾ…… ಎಲ್ಲೂ ನಿಮ್ ಮುಖ ಕಾಣೋ ಕನ್ನಡಿ ಸಿಗ್ಲಿಲ್ಲಾ…… ಎಲ್ಲದ್ರಲ್ಲೂ ನನ್ ಮುಖನೇ ಕಾಣ್ತಾ ಇತ್ತು..!!!

ಇಲಿಗಳಿಗೆ ಪೌಡರ್
ಸೇಲ್ಸ್‍ಮ್ಯಾನ್ : ಸಾ…… ನಿಮ್ಗೆ ಈ ಪೌಡರ್ ಬೇಕಾ….?
ರಾಂಪ : ಇದು ಯಾರಿಗೆ ?
ಸೇಲ್ಸ್‍ಮ್ಯಾನ್ : ಇಲಿಗಳಿಗೆ ಸಾರ್….!
ರಾಂಪ : ಬೇಡ….. ಬೇಡ…. ಇವತ್ತು ಪೌಡರ್ ಕೊಟ್ರೆ ನಾಳೆ ಅವುಗಳು ಲಿಪ್ಸ್‍ಟಿಕ್ ಕೇಳ್ಬಹುದು…!!!

ಆಫೀಸಿಗೆ ಲೇಟು
ಬಾಸು : ಯಾಕೋ ಆಫೀಸಿಗೆ ಲೇಟು ?
ಕ್ಲರ್ಕ್ : ಅಡಿಗೆ ಮಾಡಿ ಹೆಂಡ್ತಿಗೆ ಟಿಫಿನ್ ಕೊಟ್ಟು ಬಂದೆ !
ಬಾಸು : ನಾಚ್ಕೆ ಆಗಲ್ಲಾ………, ನಾನು ಅಡಿಗೆ ಮಾಡೀ, ಪಾತ್ರೆ ತೊಳೆದು ಬೇಗ ಬರಲ್ವಾ…!!!

Software company ಗೋಳು
ಕಷ್ಟಪಟ್ಟು engineering ಸೇರಿದ್ವಿ, 8 sem exams ಬರೆದು ಪಾಸಾದ್ವಿ,
Software company ಸೇರಿ, ಎಲ್ಲಾ ಹಾಳಾಗೋಯ್ತಲ್ಲಾ.
ಸಂಜೆ ಆದ್ರೆ ಆಟ ಆಡ್ತಿದ್ವಿ, ಕ್ಲಾಸ್ bunk ಮಾಡಿ ಸಿನಿಮಾಗೆ ಹೋಗ್ತಿದ್ವಿ,
Software company ಸೇರಿ, weekend ಕಾಯೋ ಹಂಗ್ ಆಗೋಯ್ತಲ್ಲಾ.
ಪೈಸೆ ಪೈಸೆಗೂ ಮನೆಯವರಿಗೆ ಲೆಕ್ಕ ಹೇಳಿ ಕಾಸು ತಗೋತಾ ಇದ್ವಿ,
Software company ಸೇರಿ, ದುಡಿಗೆ ಬೆಲೆ ಇಲ್ದಂಗೆ ಆಗೋಯ್ತಲ್ಲಾ.
ಕಾಲೇಜ್ ಗೆ ಹೋದ್ರು ಕ್ಲಾಸ್ ಗೆ ಹೋಗ್ತಿರ್ಲ್ಲಿಲ್ಲ, ಕ್ಲಾಸ್ ಗೆ ಹೋದ್ರು ಪಾಟ ಕೇಳ್ತಿರ್ಲ್ಲಿಲ್ಲ
Software company ಸೇರಿ ಕೆಲಸ ಇಲ್ದೆ forward mails ಓದೋ ಹಂಗ್ ಆಗೋಯ್ತಲ್ಲಾ.
ಪರೀಕ್ಷೆಯಲ್ಲಿ fail ಆದ್ರೂ ಅಳ್ತಿರ್ಲ್ಲಿಲ್ಲ, ಜೇಬಲ್ಲಿ ದುಡ್ದು ಇರ್ದಿದ್ರೂ ಯೋಚನೆ ಮಾಡ್ತಿರ್ಲ್ಲಿಲ್ಲ.
Software company ಸೇರಿ ಮುಂದೆ ಹೇಗಪ್ಪಾ ಜೀವನ ಅನ್ನೋ ಹಂಗ್ ಆಗೋಯ್ತಲ್ಲಾ.
ಮಜ ಮಾಡೋದ್ ಮರೀತಿರ್ಲ್ಲಿಲ್ಲ, ಬೇಜಾರ್ ಅಂದ್ರೇನೇ ಗೊತ್ತಿರ್ಲ್ಲಿಲ್ಲ,
Software company ಸೇರಿ ಜೀವನವೇ ಬೇಜಾರ್ ಆಗೋಯ್ತಲ್ಲಾ..

ಕಂಫ್ಯೂಟರ್ ಇಂಜಿನಿಯರ್‌ಗಳ ಕನ್ನಡ ಸಿನಿಮಾ
ಕಂಫ್ಯೂಟರ್ ಇಂಜಿನಿಯರ್‌ಗಳು ಸಿನಿಮಾ ಮಾಡಿದರೆ, ಕನ್ನಡ ಸಿನಿಮಾಗಳ ಹೆಸರುಗಳು…..
ಮುಸ್ಸಂಜೆ MOUSE
ನಾನು ನನ್ನ WINDOWS
ಭೂಲೋಕದಲ್ಲಿ BILLGATES
ಬಂಗಾರದ DATA
ನನ್ನ ಪ್ರೀತಿಯ RAM
ಸೋಲಿಲ್ಲದ SERVER
ನೀ ಬರೆದ C-PROGRAMME
ಆಂಟಿ VIRUS
ಕವಿರತ್ನ KEYBOARD ದಾಸ
VIRUSಗಳು ಸಾರ್ VIRUSಗಳು
XP-ಸಾಂಗ್ಲಿಯಾನ
ಯಾರದೋ SOFTWARE ಎಲ್ಲಮ್ಮನ HARDWARE

ಈಜುಕೊಳಕ್ಕೆ ಧುಮುಕು
ನಿರ್ದೇಶಕ : ನೀವು ೧೦ನೇ ಮಹಡಿಯಿಂದ ಈಜುಕೊಳಕ್ಕೆ ಧುಮುಕಬೇಕು.
ನಟ : ಆದರೆ ನನಗೆ ಈಜು ಬರುವುದಿಲ್ಲ ?
ನಿರ್ದೇಶಕ : ಯೋಚಿಸಬೇಡಿ, ಅದರಲ್ಲಿ ನೀರು ಇರುವುದಿಲ್ಲ. !!!

ಚಲನಚಿತ್ರಗಳ ಪ್ರಭಾವ
ಗುರು: ಮಹಾತ್ಮ ಗಾಂಧಿ ಯಾರು ?
ಶಿಷ್ಯ: ಮುನ್ನಾಭಾಯಿಗೆ, ಗೆಳತಿಯನ್ನು ಪಡೆಯಲು ಸಹಾಯಮಾಡಿದವನು

ರೇಡಿಯೋ ಒಳಗೆ ಗಾಯಕ
ರಾಮಣ್ಣನ ರೇಡಿಯೋ ಕೆಟ್ಟು ಹೋಯ್ತು. ಬೇಸರದಿಂದ ರೇಡಿಯೋ ಓಪನ್ ಮಾಡಿ ನೋಡಿದರೆ ಅದರಲ್ಲಿ ಒಂದು ಜಿರಲೆ ಸತ್ತಿತ್ತು.
ರಾಮಣ್ಣ ದುಃಖಿಸಿದ – ಓ ದೇವರೇ, ಒಂದು ಒಳ್ಳೆಯ ಗಾಯಕನನ್ನೇ ಸಾಯಿಸಿಬಿಟ್ಟೆಯಾ !!!

ಹೋಲಿಕೆ
ಕ್ರಿಕೆಟ್ ತಂಡಗಳನ್ನು ಕನ್ನಡ ಸಿನಿಮಾ ರಂಗದ ನಾಯಕರಿಗೆ ಹೋಲಿಸಬಹುದಾದರೆ………..
ಆಸ್ಟ್ರೇಲಿಯ : ರಜನಿಕಾಂತ್ (ಯಾವತ್ತೂ ಹಿಟ್)
ದಕ್ಷಿಣ ಆಫ್ರಿಕಾ : ಶಂಕರ್ ನಾಗ್ (ಪ್ರತಿಭಾವಂತ, ಆದರೆ ದುರದೃಷ್ಟವಂತ)
ಶ್ರೀಲಂಕಾ : ಸುದೀಪ್ (ಪ್ರತಿಭಾವಂತ, ಆದ್ರೆ ಹಿಟ್ ಇಲ್ಲ)
ಪ್ರೇಮ್ : ಬಾಂಗ್ಲಾದೇಶ (ಅದೃಷ್ಟ)
ನ್ಯೂಜಿಲೆಂಡ್ : ರಮೇಶ್ (ನಿಧಾನವಾಗಿ ಸಾಧನೆಯಲ್ಲಿ ಪ್ರಗತಿ)
ಇಂಗ್ಲೆಂಡ್ : ಶಿವರಾಜ್ ಕುಮಾರ್ (ಸೋಲು – ಗೆಲುವು ಮುಖ್ಯ ಅಲ್ಲ)
ಐರ್‍ಲೆಂಡ್ : ಗಣೇಶ್(ಪಾದಾರ್ಪಣೆಯಲ್ಲೇ ಹಿಟ್)
ಭಾರತ : ಜಗ್ಗೇಶ್ (ಕಾಮಿಡಿ ಜೊತೆಗೆ ಟ್ರ್ಯಾಜಿಡಿ)

ಸಿನಿಮಾ
ನಿರ್ಮಾಪಕ : ನಾನು ಎಲ್ಲರ ಹೃದಯಕ್ಕೆ ಹತ್ತಿರವಾಗುವಂಥ ಒಂದು ಸಿನಿಮಾ ಮಾಡಬೇಕೆಂದಿದ್ದೇನೆ, ಹೆಸರು ಹೇಳಿ.
ಗುಂಡ : ‘ಸ್ಟೆಥೆಸ್ಕೋಪ್’ !!!

ಎಲ್ಲಾ ಮರೀತೀನಿ!
ಅವಳು: ನಾನು ನಿನಗೋಸ್ಕರ ಏನ್ ಬೇಕಾದ್ರು ಬಿಡುತ್ತೀನಿ.
ಅವನು: ಅಪ್ಪ, ಅಮ್ಮ?
ಅವಳು: ಖಂಡಿತ
ಅವನು: ಅಣ್ಣ, ತಮ್ಮ?
ಅವಳು: ಖಂಡಿತ
ಅವನು: ಅಕ್ಕ, ತಂಗಿ?
ಅವಳು: ಖಂಡಿತ
ಅವನು: ಊಟ, ತಿಂಡಿ?
ಅವಳು: ಖಂಡಿತ
ಅವನು: ಧಾರಾವಾಹಿಗಳು?
ಅವಳು: ನಾಲಿಗೆ ಬಿಗಿ ಹಿಡಿದು ಮಾತಾಡು!!

ಶರಾಬು
ಶರಾಬು ದೇಶದ ಜನರನ್ನು ನಿರ್ಗತಿಕರನ್ನಾಗಿ ಮಾಡುತ್ತಿರುವ ರಾಕ್ಷಸ.
ಬನ್ನಿ, ಎಲ್ಲರೂ ಸೇರಿ ಒಂದೊಂದು ಬಾಟಲಿ ಕುಡಿದು ಎಲ್ಲವನ್ನು ಖಾಲಿ ಮಾಡೋಣ !!!

ವಿಚಿತ್ರ
ಗಂಡ ಕುಡಿದ ಅಮಲಿನಲ್ಲಿ ಹೆಂಡತಿಯ ಹತ್ತಿರ ಬಂದು ಹೇಳಿದ:
‘ಲೇ, ಇವತ್ತು ಒಂದು ಭಾರಿ ವಾಹನ ನನ್ನ ಮೇಲೆ ಹರಿದ್ರು ನಾನು ಸಾಯಲಿಲ್ಲ ಕಣೇ’
‘ಇದು ವಿಚಿತ್ರಾನೇ. ಅದಿರಲಿ ನಿಮ್ಮ ಮೇಲೆ ಹರಿದ ವಾಹನ ವಾದರೂ ಯಾವುದು. ?’ ಹೆಂಡತಿ ಕೇಳಿದಳು.

‘AEROPLANE’ ಕಣೇ !!!!!

ಬ್ರ್ಯಾಂಡಿ
ಸ್ನೇಹಿತ : ಬ್ರ್ಯಾಂಡಿ ಕುಡಿದ್ರೆ ಕೆಮ್ಮು ಹೋಗುತ್ತಾ ?
ಗುಂಡ : ನನ್ನ ಹೊಲ, ಮನೆನೇ ಹೋಗಿರುವಾಗ ನಿನ್ನ ಕೆಮ್ಮು ಯಾಕೆ ಹೋಗಲ್ಲಾ !!!

ಗುಂಡ ಮ್ಯಾರೀಡ್
ಕುಡುಕನೊಬ್ಬ ಬಾರಿಗೆ ಹೋದ. ಪಕ್ಕದ ಟೇಬಲ್‍ನಲ್ಲಿದ್ದವ ವೇಟರ್‌ಗೆ ‘ಜಾನಿ ವಾಕರ್ ಸಿಂಗಲ್’ ಎಂದ.
ಮುಂದಿನ ಟೇಬಲ್‍ನಲ್ಲಿ ಕೂತಿದ್ದ ಮತೊಬ್ಬ ‘ಪೀಟರ್ ಸ್ಕಾಚ್ ಸಿಂಗಲ್’ ಎಂದ.
ಈ ಕುಡುಕನೂ ಸ್ಟೈಲಾಗಿ ‘ಗುಂಡ ಮ್ಯಾರೀಡ್’ ಎಂದ.

ಕಾಫಿ ಬಾರ್ ಮತ್ತು ವೈನ್ ಬಾರ್
ಕಾಫಿ ಬಾರ್‌ಗೂ ಮತ್ತು ವೈನ್ ಬಾರ್‌ಗೂ ಏನ್ ವ್ಯತ್ಯಾಸ ?
ಎಲ್ಲಾ ಪ್ರೀತಿಗಳು ಕಾಫಿ ಬಾರ್‌ನಲ್ಲಿ ಪ್ರಾರಂಭವಾಗಿ ವೈನ್ ಬಾರ್‌ನಲ್ಲಿ ಮುಕ್ತಾಯವಾಗುತ್ತದೆ !!!

ಟ್ಯಾಕ್ಸಿ ಬಾಡಿಗೆ
ಕುಡುಕನೊಬ್ಬ ಟ್ಯಾಕ್ಸಿ ನಿಲ್ಲಿಸಿ ಕೂತು ಚಾರ್-ಮಿನಾರ್ ಕಡೆಗೆ ಬಿಡು ಎಂದ, ಸ್ವಲ್ಪ ಹೊತ್ತಾದ ನಂತರ ಚಾರ್-ಮಿನಾರ್ ಬಂತು:
ಕುಡುಕ: ಬಾಡಿಗೆ ಎಷ್ಟಾಯ್ತು ?
ಡ್ರೈವರ್: ಇಪ್ಪತ್ತು ರೂಪಾಯಿ
ಕುಡುಕ: ಜೇಬಿನಿಂದ ಹತ್ತು ರೂಪಾಯಿಯ ನೋಟೊಂದನ್ನು ಡ್ರೈವರಿಗೆ ಕೊಟ್ಟ.
ಡ್ರೈವರ್: ಇದು ಹತ್ತು ರೂಪಾಯಿ
ಕುಡುಕ: ನೀನು ನನ್ನ ಹುಚ್ಚ ಅಂದ್ಕೊಂಡಿದ್ದಿಯೇನು ? ನೀನೂ ನನ್ನ ಜೊತೆಗೆ
ಕೂತ್ಕುಂಡಿರಲಿಲ್ವ ? ನಿನ್ನಬಾಡಿಗೆ ನಾನು ಕೊಡ್ಲ ???

ಕುಡುಕರ ಚಳಿ
ನಡುರಾತ್ರಿ ಕುಡುಕನೊಬ್ಬ ಖಾಲಿ ಗೋರಿಯೊಳಗೆ ಬಿದ್ದು ‘ಚಳಿ ತಾಳೋಕಾಗ್ತಾ ಇಲ್ಲ…ಯಾರದರೂ ಬನ್ನಿ’ ಎಂದು ಕೂಗುತ್ತಾ ಇದ್ದ.
ಇನ್ನೊಬ್ಬ ಕುಡುಕ ಬಂದು ಕೆಳಗೆ ಬಾಗಿ ನೋಡಿ…’ಚಳಿಯಾಗದೆ ಇನ್ನೇನಾದೀತು? ಮೂರ್ಖರು! ನಿನ್ನನ್ನು ಗೋರಿಗೆ ಇಳಿಸಿದ ಮೇಲೆ ಮಣ್ಣು ಮುಚ್ಚಲು ಮರೆತ್ತಿದ್ದಾರೆ’ ಎಂದು ಗೋರಿಗೆ ಮಣ್ಣು ತುಂಬತೊಡಗಿದ…

2 responses to this post.

  1. Posted by ROHIT on April 3, 2010 at 12:32 pm

    superb,cont d same

    Reply

  2. thanks this joks

    Reply

Leave a comment